ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ): ಎಲ್ಲರಿಗೂ 2022 ಕ್ಕೆ ವಸತಿ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY): ಎಲ್ಲರಿಗೂ ವಸತಿ

Home Loans Made Easy!

Home » Articles » ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY): ಎಲ್ಲರಿಗೂ ವಸತಿ

ಪ್ರಧಾನ್ ಮಂತ್ರಿ ಆವಾಸ್ ಯೋಜನಾ (ಪಿಎಂಎವೈ) 25 ಜೂನ್ 2015 ರಂದು ಎಲ್ಲರಿಗೂ ವಸತಿ ನೀಡಲು ಯೋಜನೆಯಿಂದ ಕಾರ್ಯರೂಪಕ್ಕೆ ಬಂದಿತು.  ಎಲ್ಲರಿಗೂ ಮತ್ತು ಪ್ರತಿಯೊಂದು ಅರ್ಹತೆ ಹೊಂದಿದ ಕುಟುಂಬ / ಸ್ವೀಕರಿಸುವವರಿಗೆ ಮನೆಗಳನ್ನು ನೀಡಲು ಈ ಧ್ಯೇಯವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಮತ್ತು ಕೇಂದ್ರ ನೋಡಲ್ ಏಜೆನ್ಸಿಗಳ (ಸಿಎನ್‌ಎಗಳು) ಮೂಲಕ ಕಾರ್ಯಗತಗೊಳಿಸುವ ಕಚೇರಿಗಳಿಗೆ ಕೇಂದ್ರೀಕೃತ ಸಹಾಯ ನೀಡುತ್ತದೆ. ‘2022ರ ವೇಳೆಗೆ ಎಲ್ಲರಿಗೂ ವಸತಿ’ ಎಂದೂ ಕರೆಯಲಾಗುವ ಈ ಕ್ರೆಡಿಟ್-ಲಿಂಕ್ಡ್ ಪಿಎಂಎವೈ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್ಎಸ್) ನಿರ್ದಿಷ್ಟ ಆರ್ಥಿಕ ವಿಭಾಗಗಳಿಗೆ ಸೇರಿದ ಭಾರತೀಯರಿಗಾಗಿ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ.  ವಸತಿ ಆಸ್ತಿ ಅಥವಾ ಭೂಮಿಯನ್ನು ಖರೀದಿಸಲು ಅಥವಾ ಮನೆ ಕಟ್ಟಲು ಸಾಲ ಪಡೆಯುವ ವ್ಯಕ್ತಿಗಳು ಈ ಸಾಲದ ಮೇಲಿನ ಬಡ್ಡಿ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಸಾಲದ ಬಡ್ಡಿ ಸಹಾಯಧನವು ಆರ್ಥಿಕವಾಗಿ ದುರ್ಬಲ ವಿಭಾಗಗಳು (ಇಡಬ್ಲ್ಯೂಎಸ್), ಕಡಿಮೆ ಆದಾಯವಿರುವ ಗುಂಪುಗಲೂ (ಎಲ್ಐಜಿ), ಅಥವಾ ಮಧ್ಯಮ-ಆದಾಯದ ಗುಂಪುಗಳಿಗೆ (ಎಂಐಜಿ) ಗೆ ಸೇರಿದ ಜನರಿಗೆ ಹಾಗೇ ಲಭ್ಯವಿರುತ್ತದೆ. ಪಿಎಂಎವೈ ನಿಯಮಗಳ ಪ್ರಕಾರ, ಆರ್ಥಿಕವಾಗಿ ದುರ್ಬಲ ವಿಭಾಗದವರ (ಇಡಬ್ಲ್ಯೂಎಸ್) ಮನೆಯ ಗಾತ್ರವು 30 ಚದರ ಮೀಟರ್‌ ಕವರ್ ವಲಯದವರೆಗೂ ಇರಬಹುದಾದರೂ ಸಚಿವಾಲಯದ ಜೊತೆಗಿನ ಸಮಾಲೋಚನೆ ಮತ್ತು ಅನುಮೋದನೆಯ ನಂತರ ಮನೆಗಳ ಗಾತ್ರವನ್ನು ವಿಸ್ತರಿಸಲು ರಾಜ್ಯಗಳು / ಯುಟಿಗಳು ಅಧಿಕಾರ ಹೊಂದಿರುತ್ತವೆ.

ಪಿಎಂಎವಾಯ್‌ ನ ವೈಶಿಷ್ಟ್ಯಗಳು

ಈ ಕೆಳಗಿನವುಗಳು ಪಿಎಂಎವಾಯ್‌ನ ಮುಖ್ಯ ಲಕ್ಷಣಗಳಾಗಿವೆ:

 1. ಫಲಾನುಭವಿಗಳು ಇಪ್ಪತ್ತು ವರ್ಷಗಳ ಅವಧಿಯವರೆಗಿನ ವಸತಿ ಸಾಲವನ್ನು ಆರಿಸಿದರೆ ಬಡ್ಡಿದರವನ್ನು 6.50% ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.
 2. ಮನೆಗಳ ಸ್ವಾಧೀನ / ನಿರ್ಮಾಣಕ್ಕಾಗಿ (ಮರುಖರೀದಿಯೂ ಸೇರಿದಂತೆ) ವಸತಿ ಸಾಲಗಳ ಮೇಲೆ ಮಧ್ಯಮ ಆದಾಯದ ಗುಂಪುಗಳಿಗೆ (ಎಂಐಜಿ) ಗೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.
 3. ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗ (ಇಡಬ್ಲ್ಯೂಎಸ್) / ಕಡಿಮೆ ಆದಾಯದ ಗುಂಪಿಗೆ (ಎಲ್‌ಐಜಿ), ಮನೆ ಕಟ್ಟಲು ಅಥವಾ ಖರೀದಿಸಲು ಗೃಹ ಸಾಲಗಳ ಮೇಲೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ವಾಸಸ್ಥಾನಗಳಿಗೆ ಕೊಠಡಿಗಳು, ಅಡಿಗೆಮನೆ ಇತ್ಯಾದಿಗಳನ್ನು ಸೇರಿಸಲು ತೆಗೆದುಕೊಂಡ ಗೃಹ ಸಾಲಗಳಿಗೆ ಬಡ್ಡಿ ಸಹಾಯಧನ ನೀಡಲಾಗುವುದು.
 4. ಈ ಪ್ರಧಾನ್ ಮಂತ್ರಿ ಆವಾಸ್ ಯೋಜನಾದಲ್ಲಿ, 4041 ಶಾಸನಬದ್ಧ ಪಟ್ಟಣಗಳನ್ನು ಒಳಗೊಂಡಿರುವ ಭಾರತದ ಎಲ್ಲಾ ನಗರ ಪ್ರದೇಶಗಳು ಒಲಗೊಂಡಿದ್ದು, ಇಲ್ಲಿ 500 Iನೇ ದರ್ಜೆಯ ನಗರಗಳಿಗೆ ಆದ್ಯತೆ ನೀಡಲಾಗಿದೆ.
 5. ನಿರ್ಮಾಣಕ್ಕಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.
 6. ಹಿರಿಯ ನಾಗರಿಕರು ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿರುವವರಿಗೆ, ನೆಲಮಹಡಿಯನ್ನು ನೀಡುವ ಆದ್ಯತೆ ನೀಡಲಾಗುತ್ತದೆ.

ಪಿಎಂಎವಾಯ್‌ನ ಪ್ರಯೋಜನಗಳು:

ಪಿಎಂಎವಾಯ್‌ನ ಮುಖ್ಯ ಪ್ರಯೋಜನಗಳು ಹೀಗಿವೆ:

 1. ಪಿಎಂಎವಾಯ್‌ ಸಬ್ಸಿಡಿ: ಪಿಎಂಎವಾಯ್‌ನ ಅತಿದೊಡ್ಡ ಪ್ರಯೋಜನವೆಂದರೆ ಅದರ ಸಬ್ಸಿಡಿ ದರವಾಗಿದೆ. ಗೃಹ ಸಾಲಗಳಿಗೆ ಬಡ್ಡಿದರಗಳು ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸುಮಾರು 10% ಇರುತ್ತದೆ ಮತ್ತು ಪಿಎಂಎವೈ ಯೋಜನೆಯೊಂದಿಗೆ, ಒಬ್ಬ ವ್ಯಕ್ತಿಗೆ 6.5% ಸಬ್ಸಿಡಿ ನೀಡಲಾಗುತ್ತದೆ. ಇದು ಪರೋಕ್ಷವಾಗಿ ಪಾವತಿಸಬೇಕಾದ ಮಾಸಿಕ ಕಂತುಗಳನ್ನು ಕಡಿಮೆ ಮಾಡುತ್ತದೆ. ಈ ಪಿಎಂಎವೈ ಸಬ್ಸಿಡಿ ವಿಶೇಷವಾಗಿ ಮಧ್ಯಮ-ಆದಾಯವಿರುವ ವರ್ಗದ ಮೇಲೆ ಅಗಾಧವಾದ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇನ್ನಷ್ಟು ಅರ್ಥಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
 2. ಎಲ್ಲರಿಗೂ ವಸತಿ: ಪ್ರಧಾನ್ ಮಂತಿ ಆವಾಸ್ ಯೋಜನಾದ ಪ್ರಕಾರ, ಸರ್ಕಾರವು ದೇಶದ ನಗರ ಪ್ರದೇಶಗಳಲ್ಲಿ 2 ಕೋಟಿ ಮಿತವ್ಯಯಕಾರಿ ಮನೆಗಳನ್ನು ನಿರ್ಮಿಸಲಿದೆ. ಆ ಮಿತವ್ಯಯಕಾರಿ ಮನೆಗಳ ನಿರ್ಮಾಣವು ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯನ್ನು ದೇಶದ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ನಾಗರಿಕರ ಜೀವನ ಮಟ್ಟವನ್ನು ಹೆಚ್ಚಿಸುವಲ್ಲಿ ಭಾರತ ಸರ್ಕಾರ ಕೈಗೊಂಡ ಪ್ರಮುಖ ಉಪಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.  60% ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವುದನ್ನು ಪರಿಗಣಿಸಿ, ಪ್ರತಿಯೊಬ್ಬರೂ ಅಗತ್ಯ ಸೌಲಭ್ಯಗಳನ್ನು ಆನಂದಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.
 3. ರಾಷ್ಟ್ರದ ಅಭಿವೃದ್ಧಿ: ಪಿಎಂಎವೈ ಭಾರತ ಸರ್ಕಾರವು ಪರಿಚಯಿಸಿದ ವಿವಿಧ ಯೋಜನೆಗಳಲ್ಲಿ ಒಂದಾಗಿದ್ದು ಈ ಯೋಜನೆಗಳು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಪ್ರಯೋಜನ ನೀಡುತ್ತವೆ. ಈ ಯೋಜನೆಗಳು ಕಡಿಮೆ-ಆದಾಯ ಮತ್ತು ಮಧ್ಯಮ-ಆದಾಯ ಬರ್ಗಗಳಿಗೆ ಸಹಾಯ ಮಾಡುವುದಲ್ಲದೇ, ದೇಶದ ಭೂ ವಲಯದಲ್ಲಿ ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳ ಮೇಲೆ ಇದು ಅತ್ಯುತ್ತಮ ಪರಿಣಾಮ ಬೀರುತ್ತವೆ, ಉದಾಹರಣೆಗೆ, ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
 4. ಇತರ ಪ್ರಯೋಜನಗಳು: ಕಡಿಮೆ ಆದಾಯದ ಗುಂಪುಗಳ ಮಹಿಳೆಯರು ವಸತಿ ಯೋಜನೆಗಳನ್ನು ಪಡೆಯುವಾಗ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ.   ವಿಧವೆಯರು, ಭಿನ್ನಲಿಂಗೀಯರು, ಹಿರಿಯ ಸದಸ್ಯರು ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿರುವ ಜನರಿಗೆ ಸಹ ಅವಕಾಶ ಕಲ್ಪಿಸಲಾಗಿದೆ. ಹಿರಿಯ ಸದಸ್ಯರು ಅವರ ದೈಹಿಕ ಆರಾಮಕ್ಕಾಗಿ ನೆಲ ಮಹಡಿಯಲ್ಲಿ ಫ್ಲಾಟ್‌ಗಳನ್ನು ಸಹ ಪಡೆಯಬಹುದು.

PMAY ಯ ಅರ್ಹತೆ:

PMAY

ಆದಾಗ್ಯೂ, ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು, ನೀವು ಸಬ್ಸಿಡಿಗಳನ್ನು ಪಡೆಯಲು ಅರ್ಹರೇ ಎನ್ನುವುದನ್ನು ಪರಿಗಣಿಸಬೇಕು. ಕೆಳಗಿನ ಅಂಶಗಳು ಪಿಎಂಎವಾಯ್ ಅರ್ಹತೆಯನ್ನು ನಿರ್ಧರಿಸುತ್ತವೆ.

 1. ವ್ಯಕ್ತಿಯ ಆದಾಯದ ಶ್ರೇಣಿಯನ್ನು ಅವಲಂಬಿಸಿ, ಅವರು ಇಡಬ್ಲ್ಯೂಎಸ್, ಎಲ್ಐಜಿ, ಅಥವಾ ಎಂಐಜಿ ವಿಭಾಗಗಳಲ್ಲಿ ಬರುತ್ತಾರೆ. ಆದಾಗ್ಯೂ, ಕುಟುಂಬದ ವಾರ್ಷಿಕ ಆದಾಯವು ಎಂಐಜಿ ಗುಂಪಿನ ಆದಾಯ ಶ್ರೇಣಿಯನ್ನು ಮೀರಿದರೆ, ಅದು ರೂ. ವಾರ್ಷಿಕ 18 ಲಕ್ಷವಾಗಿರುತ್ತದೆ, ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅನರ್ಹರಾಗಬಹುದು.
 2. ಮಹಿಳೆಯ ಹೆಸರು ಪತ್ರ ಅಥವಾ ಆಸ್ತಿ ಪತ್ರಗಳಲ್ಲಿರಬೇಕು. ಯೋಜನೆಯನ್ನು ಪಡೆಯಲು ಇದು ಮಹಿಳೆಯ ಹೆಸರಿನಲ್ಲಿ ಮನೆಯಿರುವ ಒಬ್ಬರೇ ಹೊಂದಿರುವ ಮಾಲೀಕತ್ವವಾಗಿರಬಹುದು, ಅಥವಾ ಇದು ಸಾಮಾನ್ಯವಾಗಿ ಜಂಟಿ ಮಾಲೀಕತ್ವವಾಗಿರುತ್ತದೆ, ಹಾಗೂ ಮಾಲೀಕರಲ್ಲಿ ಒಬ್ಬರು ಮಹಿಳೆಯಾಗಿರಬೇಕು.
 3. ಪಿಎಂಎವಾಯ್‌ ಹೊಸ ಆಸ್ತಿ ಖರೀದಿಗೂ ಲಭ್ಯವಿದೆ. ಅಲ್ಲದೆ, ಕ್ರೆಡಿಟ್-ಲಿಂಕ್ಡ್ ಸ್ಕೀಮ್‌ಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಇತರ ಪಕ್ಕಾ ಆಸ್ತಿಗಳನ್ನು ಹೊಂದಿರಬಾರದು.
 4. ಫಲಾನುಭವಿಗಳು ಈ ಯೋಜನೆಯನ್ನು ಬಳಸಲು ಮೊದಲೇ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಕೇಂದ್ರೀಯ ನೆರವು ಅಥವಾ ಇತರ ವಸತಿ ಯೋಜನೆಯಿಂದ ಪ್ರಯೋಜನಗಳನ್ನು ಪಡೆದಿರಬಾರದು.
 5. ಜನಗಣತಿ 2011ರ ಪ್ರಕಾರ ಮನೆ ಅಥವಾ ಆಸ್ತಿಯು ಕನಿಷ್ಠ ಒಂದು ಪ್ರದೇಶ, ಪಟ್ಟಣಗಳು, ಗ್ರಾಮಗಳು ಅಥವಾ ನಗರಗಳಿಗೆ ಸೇರಿರಬೇಕು.
 6. ಫಲಾನುಭವಿಗಳು ಈ ಮೊದಲು ಯಾವುದೇ ಹಣಕಾಸು ಸಂಸ್ಥೆಗಳಿಂದ ಪಿಎಂಎವೈ ಅಥವಾ ಇತರ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಲ್ಲಿ ಪ್ರಯೋಜನಗಳನ್ನು ಪಡೆದುಕೊಂಡಿರಬಾರದು.
 7. ಗೃಹ ಸಾಲವನ್ನು ಪಡೆಯಲು ಮೊದಲ ಕಾರಣ ಈಗಾಗಲೇ ಅಸ್ತಿತ್ವದಲ್ಲಿರುವ ಆಸ್ತಿಯ ನವೀಕರಣ ಅಥವಾ ವಿಸ್ತರಣೆಯಾಗಿದ್ದರೆ, ಪ್ರಾಥಮಿಕ ಸಾಲದ ಕಂತು ಪಡೆದ 36 ತಿಂಗಳೊಳಗೆ ಮೇಲೆ ಹೇಳಲಾದ ಕೆಲಸವನ್ನು ಪೂರ್ಣಗೊಳಿಸಬೇಕು.

ಪಿಎಂಎವಾಯ್‌ಗೆ‌ ಆನ್‌ಲೈನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ:

ನೀವು ಪಿಎಂಎವಾಯ್‌ ಗೆ ಅರ್ಹತೆ ಹೊಂದಿದ್ದರೆ ಮತ್ತು ಪಿಎಂಎವಾಯ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆಂದು ಚಿಂತಿಸುತ್ತಿದ್ದರೆ, ಕೆಳಗಿನ ಹಂತ ಹಂತದ ಮಾರ್ಗದರ್ಶಿಯನ್ನು ಅನುಸರಿಸಿ.

 1. ನೀವು ಪಿಎಂಎವಾಯ್‌ಗೆ ಅರ್ಹತೆ ಹೊಂದಿರುವ ವರ್ಗವನ್ನು ಗುರುತಿಸಿ.
 2. ನಂತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://pmaymis.gov.in/
 3. ಮುಖ್ಯ ಮೆನುವಿನಲ್ಲಿ ‘Citizen Assessment’ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿದಾರರ ವರ್ಗವನ್ನು ಆರಿಸಿ.
 4. ನಿಮ್ಮ ಆಧಾರ್ ವಿವರಗಳನ್ನು ನಮೂದಿಸಬೇಕಾದ ಪ್ರತ್ಯೇಕ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ.
 5. ನಿಮ್ಮ ವೈಯಕ್ತಿಕ, ಆದಾಯ ಮತ್ತು ಬ್ಯಾಂಕ್ ಖಾತೆಯ ವಿವರಗಳು ಮತ್ತು ಪ್ರಸ್ತುತ ವಸತಿ ವಿಳಾಸದೊಂದಿಗೆ ಆನ್‌ಲೈನ್ ಪಿಎಂಎವೈ ಅರ್ಜಿಯನ್ನು ಭರ್ತಿ ಮಾಡಿ.
 6. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ವಿವರಗಳು ನಿಖರವಾಗಿವೆಯೇ ಎಂದು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.

‘ಸಿಟಿಜನ್ ಅಸೆಸ್ಮೆಂಟ್’ ಅಡಿಯಲ್ಲಿ ‘ ನಿಮ್ಮ ಮೌಲ್ಯಮಾಪನದ ಸ್ಥಿತಿಯನ್ನು ಟ್ರ್ಯಾಕ್ ಮಾಡಿ ‘ ಎನ್ನುವುದನ್ನು ಕ್ಲಿಕ್ ಮಾಡುವ ಮೂಲಕ ನೀವು ಉಪಕರಣದ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು .  

ಪಿಎಂಎವಾಯ್‌ಗೆ  ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

ನಿಮಗೆ ಆನ್‌ಲೈನ್ ಬಳಸಲು ಸಾಧ್ಯವಾಗದಿದ್ದರೆ ಮತ್ತು ಅರ್ಜಿ ಸಲ್ಲಿಸುವ ಮಾರ್ಗಗಳ ಬಗ್ಗೆ ಚಿಂತಿಸುತ್ತಿದ್ದರೆ, ಪಿಎಂ ಆವಾಸ್ ಯೋಜನೆ ಸಹ ಆಫ್‌ಲೈನ್ ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸುತ್ತದೆ. ರಾಜ್ಯ ಸರ್ಕಾರ ನಡೆಸುವ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಕೇವಲ ರೂ .25 ಹಾಗೂ ಜಿಎಸ್‌ಟಿ ಜೊತೆಗೆ ಅರ್ಜಿಯನ್ನು ಭರ್ತಿ ಮಾಡಿ. ಯಾವುದೇ ಖಾಸಗಿ ಕೇಂದ್ರಗಳು ಅಥವಾ ಬ್ಯಾಂಕುಗಳಿಗೆ ಆಫ್‌ಲೈನ್ ಪಿಎಂಎವಾಯ್‌ ಅರ್ಜಿಗಳನ್ನು ಸ್ವೀಕರಿಸಲು ಅನುಮತಿಯಿದಿಲ್ಲವೆನ್ನುವುದನ್ನು ಗಮನಿಸಿ.

ಈ ಲೇಖನವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಿ . 

Apply for a home loan

+91

Top Cities

* I declare that the information I have provided is accurate to the best of my knowledge. I hereby authorize Home First and their affiliates to call and/or send texts via SMS to me for promoting their products.