ಗೃಹ ಸಾಲ ಅರ್ಹತೆ: ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಲು ಸಲಹೆಗಳು
•
ಗೃಹ ಸಾಲ ಪಡೆಯಲು ನೀವು ಸಾಕಷ್ಟು ಅರ್ಹತೆ ಹೊಂದಿದ್ದೀರಾ? ಪ್ರತಿಯೊಬ್ಬ ಸಾಲದ ಅರ್ಜಿದಾರರೂ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಪ್ರಸ್ತುತ ಪ್ರಶ್ನೆಗೆ ಪರಿಹಾರವನ್ನು ಹೊಂದಿರುವುದಿಲ್ಲ. ಸಾಲ ಪಡೆಯುವುದು ಅಥವಾ ಸಾಲವನ್ನು ಮಂಜೂರು ಮಾಡಿಕೊಳ್ಳುವುದು ಸುಲಭವಲ್ಲ, ಏಕೆಂದರೆ ಇದಕ್ಕೆ ನೀಡಿರುವ ಸಾಲದ ಬಗ್ಗೆ ಸರಿಯಾದ ಮತ್ತು ಸಂಪೂರ್ಣ ತಿಳುವಳಿಕೆಯೊಂದಿಗೆ ಸಂಪೂರ್ಣ ಸಂಶೋಧನೆಯ ಅಗತ್ಯವಿರುತ್ತದೆ. ಆದ್ದರಿಂದ, ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಗೃಹ ಸಾಲದ ಅರ್ಹತೆಯನ್ನು ನೋಡುವಂತೆ ಅಧಿಕವಾಗಿ ಶಿಫಾರಸು ಮಾಡಲಾಗಿದೆ.
ಗೃಹ ಸಾಲದ ಅರ್ಹತೆಯೆಂದರೇನು?
ಗೃಹ ಸಾಲದ ಅರ್ಹತೆಯೆಂದರೆ ಒಂದು ಮನೆಯನ್ನು ಹೊಂದಲು ನೀವು ಎಷ್ಟು ಮೊತ್ತದ ಸಾಲವನ್ನು ಪಡೆಯುತ್ತೀರಿ ಮತ್ತು ನೀವು ಸಾಲಕ್ಕೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸೂಚಿಸುವುದಾಗಿದೆ. ನಿಮ್ಮ ಗೃಹ ಸಾಲದ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಅಂಶಗಳಾದ ಅರ್ಜಿದಾರರ ವಯಸ್ಸು, ಆದಾಯ, ಉದ್ಯೋಗ ಮತ್ತು ಆಸ್ತಿ, ಕ್ರೆಡಿಟ್ ಸ್ಕೋರ್ ಮತ್ತು ಇನ್ನೂ ಹೆಚ್ಚಿನದನ್ನು ಪರಿಗಣಿಸಲಾಗುತ್ತದೆ.
ಹೋಮ್ ಲೋನ್ ಅರ್ಹತೆಯನ್ನು ಲೆಕ್ಕಾಚಾರ ಮಾಡಿ
ಹೋಂ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್:
ಗೃಹ ಸಾಲದ ಅರ್ಹತಾ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು ಅದು ಪಡೆಯಬಹುದಾದ ಸಾಲದ ಮೊತ್ತದ ಅಂದಾಜನ್ನು ನೀಡುತ್ತದೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನೀವು ಅರ್ಹರಾಗಿರುವ ಮೊತ್ತವನ್ನು ತಿಳಿದುಕೊಳ್ಳುವುದು ಸಾಲದ ಅನುಮೋದನೆಯ ಸಾಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾಲ್ಕುಲೇಟರ್ ಆದಾಯ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ತ್ವರಿತವಾಗಿ ಫಲಿತಾಂಶಗಳನ್ನು ಒದಗಿಸುತ್ತದೆ, ಹಾಗೂ ಇದನ್ನು ನಿಗದಿತ ಮಾಸಿಕ ಭಾಧ್ಯತೆಗಳು, ವಯಸ್ಸು ಮುಂತಾದ ವಿವರಗಳನ್ನು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ. ಆದಾಗ್ಯೂ, ಸಾಲದ ವಿನಂತಿಯನ್ನು ಅನುಮೋದಿಸುವ ಮೊದಲು, ಸಾಲ ನೀಡುವ ಸಂಸ್ಥೆಗಳು ಕ್ರೆಡಿಟ್ ಸ್ಕೋರ್, ಹಣಕಾಸಿನ ಸ್ಥಿತಿ , ಇತ್ಯಾದಿಗಳನ್ನು ಪರಿಗಣಿಸುತ್ತವೆ.
ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೇಗೆ ಲೆಕ್ಕಹಾಕಲಾಗುತ್ತದೆ?
ನೀವು ಮರುಪಾವತಿಸಬಹುದಾದಷ್ಟೇ ಹಣವನ್ನು ಬ್ಯಾಂಕುಗಳು ನಿಮಗೆ ಸಾಲವಾಗಿ ನೀಡುತ್ತವೆ. ನಿಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸುವಾಗ, ನೀವು ಇಎಂಐ ಪಾವತಿಸಬಹುದೇ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ. ಬ್ಯಾಂಕುಗಳು ನಿಗದಿತವಾದ ಆದಾಯ ಹಾಗೂ ಭಾಧ್ಯತೆಗಳ ಅನುಪಾತದ (ಎಫ್ಒಐಆರ್) ಮಿತಿ ಹೊಂದಿರುತ್ತವೆ. ಇಲ್ಲಿನ ಪರಿಕಲ್ಪನೆಯೆಂದರೆ ಒಂದು ತಿಂಗಳಿಗೆ ನಿಮ್ಮ ನಿಗದಿತ ಜವಾಬ್ದಾರಿಗಳು (ಪರಿಗಣನೆಯಲ್ಲಿರುವ ಸಾಲವನ್ನೂ ಒಳಗೊಂಡಂತೆ ಎಲ್ಲಾ ಇಎಂಐಗಳು) ನಿಮ್ಮ ನಿವ್ವಳ ಗಳಿಕೆಯ ನಿರ್ದಿಷ್ಟ ಶೇಕಡಾವನ್ನು ಮೀರಬಾರದು ಎಂಬುದಾಗಿದೆ.
FOIR = ಸ್ಥಿರ ಜವಾಬ್ದಾರಿಗಳು ÷ ನಿವ್ವಳ ಆದಾಯ
ಪ್ರತಿಯೊಂದು ಬ್ಯಾಂಕ್ಗೂ ವಿಶಿಷ್ಟವಾದ ಮಿತಿ ಇರಬಹುದು. ಇದು 40% ರಿಂದ 50% ವರೆಗೆ ಇರಬಹುದು. ನಿಮ್ಮ ನಿವ್ವಳ ಮಾಸಿಕ ಆದಾಯದ ಶೇಕಡಾವಾರು ಪ್ರಮಾಣವನ್ನು ಇಎಂಐ ಉಲ್ಲಂಘಿಸುತ್ತಿದ್ದಲ್ಲಿ ಬ್ಯಾಂಕುಗಳು ನಿಮಗೆ ಸಾಲ ನೀಡುವುದಿಲ್ಲ. ಆದ್ದರಿಂದ, ನಿಮ್ಮ ನಿವ್ವಳ ಮಾಸಿಕ ಆದಾಯವು 50,000 ರೂ. ಆಗಿದ್ದಲ್ಲಿ ಮತ್ತು FOIR 50% ಆಗಿದ್ದರೆ, ನಿಮಗೆ ತಿಂಗಳಿಗೆ 25 ಸಾವಿರ ರೂ. ಇಎಂಐ ಇರುವ ಒಂದು ಸಾಲ ಸಿಗಬಹುದು
ನೀವು ಮನೆ ಬಾಡಿಗೆಯಂಥ ಇತರ ಸ್ಥಿರ ಬಾಧ್ಯತೆಗಳನ್ನೂ ಸಹ ನೀಡಬಹುದು. ಬ್ಯಾಂಕ್ ಬಾಡಿಗೆಯನ್ನು ನಿಗದಿತ ಜವಾಬ್ದಾರಿಯೆಂದು ಪರಿಗಣಿಸಿದರೆ, ಮಿತಿ ಸಾಮಾನ್ಯವಾಗಿ ಸ್ವಲ್ಪ ಹೆಚ್ಚಿರುತ್ತದೆ.
ನಿಮ್ಮ ಮನೆ ಸಾಲದ ಅರ್ಹತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಅಂಶಗಳು:
- ಒಳ್ಳೆಯ ಮರುಪಾವತಿ ಇತಿಹಾಸ
- ಸ್ಥಿರವಾದ ಹಣಕಾಸು ಇತಿಹಾಸ
- ಯಾವುದೇ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಾಕಿಯಿಲ್ಲ
- 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್
- ನಿಯಮಿತ ಆದಾಯ
- ಸಹ-ಅರ್ಜಿದಾರರಾಗಿ ಕೆಲಸದಲ್ಲಿರುವ ಸಂಗಾತಿ
- ಕಡಿಮೆ ಕ್ರೆಡಿಟ್ ಬಳಕೆಯ ಅನುಪಾತ
- ಕಡಿಮೆ ಅವಲಂಬಿತರು
ನಿಮ್ಮ ಗೃಹ ಸಾಲದ ಅರ್ಹತೆಯನ್ನು ವಿಸ್ತರಿಸಲು ಹಲವಾರು ಮಾರ್ಗಗಳಿವೆ. ನಿಮ್ಮ ಒಟ್ಟಾರೆ ಗೃಹ ಸಾಲದ ಅರ್ಹತೆಯನ್ನು ಗಮನಾರ್ಹವಾಗಿ ಸುಧಾರಿಸಲು ಅವುಗಳಲ್ಲಿ ಯಾವುದಾದರೂ ಅಥವಾ ಆ ವಿಧಾನಗಳ ಮಿಶ್ರಣವು ನಿಮಗೆ ಸಹಾಯ ಮಾಡುತ್ತದೆ:
- ನಿಮ್ಮ ಆದಾಯವನ್ನು ಹೆಚ್ಚಿಸಿ: ಸ್ಪಷ್ಟವಾಗಿ, ಇದು ಸಾಮಾನ್ಯವಾಗಿ ಅತ್ಯಂತ ಸ್ಪಷ್ಟವಾದ ಉತ್ತರವಾಗಿದ್ದರೂ ಇದು ಅಷ್ಟೊಂದು ಸರಳವಲ್ಲ. ನಿಮ್ಮ ಬಳಿ ಹೆಚ್ಚು ಹಣವಿದ್ದಷ್ಟೂ, ನಿಮ್ಮ ಸಾಲದ ಅರ್ಹತೆ ಹೆಚ್ಚಾಗುತ್ತದೆ. ನೀವು ಆದಾಯ ಗಳಿಸುವ ಸ್ವತ್ತುಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಬಳಿ ಎರಡನೇ ಮನೆಯಿದಿದ್ದರೆ ಹಾಗೂ ಅದನ್ನು ಬಾಡಿಗೆಗೆ ನೀಡಿರದಿದ್ದರೆ, ನೀವು ಆ ಮನೆಯನ್ನು ಬಾಡಿಗೆಗೆ ಕೊಡುವುದನ್ನು ಪರಿಗಣಿಸಬಹುದು. ಅಂದ ಹಾಗೇ, ಈ ಆದಾಯವು ನಿಮ್ಮ ಆದಾಯ ತೆರಿಗೆ ವರದಿಯಯಲ್ಲೂ ಕಾಣಬೇಕು.
- ಹೆಚ್ಚಿನ ಅವಧಿಯನ್ನು ಆರಿಸಿಕೊಳ್ಳಿ: ನೀವು ಸಾಲದ ಅವಧಿಯನ್ನು ಹೆಚ್ಚಿಸಿದಾಗಲೆಲ್ಲಾ, ನಿಮ್ಮ ಗೃಹ ಸಾಲದ ಅರ್ಹತೆಯಲ್ಲಿ ಹೆಚ್ಚಳವಾಗುತ್ತದೆ, ಏಕೆಂದರೆ ನಿಮಗೆ ಸಾಲವನ್ನು ಮರುಪಾವತಿಸಲು ಸಾಕಷ್ಟು ಸಮಯವಿದೆ ಎಂದು ಸಾಲದಾತರು ಪರಿಗಣಿಸುತ್ತಾರೆ. ಆದ್ದರಿಂದ, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಅವಕಾಶ ಹೆಚ್ಚಾಗುತ್ತದೆ. ಹೆಚ್ಚಿನ ಅವಧಿಯ ಸಾಲಗಳು ಸಾಲಗಾರರಿಗೆ ಅದನ್ನು ಮರುಪಾವತಿಸಲು ಹೆಚ್ಚು ಸಮಯ ನೀಡುತ್ತದೆ, ಇದು ಸಮಯೋಚಿತ ಪಾವತಿಗೆ ಕಾರಣವಾಗುತ್ತದೆ ಮತ್ತು ಸಾಲ ನೀಡುವವರಿಗೆ ಇರಬಹುದಾದ ಅಪಾಯವನ್ನು ಕಡಿಮೆ ಮಾಡುತ್ತದೆ.
- ಅಸ್ತಿತ್ವದಲ್ಲಿರುವ ಸಾಲಗಳನ್ನು ತೀರಿಸಿ: ಅಸ್ತಿತ್ವದಲ್ಲಿರುವ ಎಲ್ಲಾ ಸಾಲಗಳನ್ನು ತೀರಿಸುವುದು ಸಾಲವನ್ನು ಮಂಜೂರು ಮಾಡಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೀವು ಅಸ್ತಿತ್ವದಲ್ಲಿರುವ ಯಾವುದೇ ಸಾಲಗಳನ್ನು ಹೊಂದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನೀವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ನಿಮ್ಮ ವೈಯಕ್ತಿಕ ಅಥವಾ ವಾಹನ ಸಾಲವನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಸಾಲಗಳ ಹಾಗೇ ತೀರಿಸಿ. ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ನೀವು ನಿಯಮಿತವಾಗಿ ಬಳಸುತ್ತಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ವೆಚ್ಚಗಳಿಗೆ ನೀವು ಯಾವುದೇ ಬಡ್ಡಿಯನ್ನು ಪಾವತಿಸದಿರುವಂತೆ, ನಿಮ್ಮ ಸಂಪೂರ್ಣ ಕ್ರೆಡಿಟ್ ಕಾರ್ಡ್ ಸಾಲವನ್ನು ಸಮಯೋಚಿತವಾಗಿ ಮರುಪಾವತಿಸುವ ಅಭ್ಯಾಸ ಮಾಡಿಕೊಳ್ಳಿ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಾಲ ಮುಕ್ತವಾಗಿರುವ ಸಾಲಗಾರರು ಸಾಲ ಮಂಜೂರು ಮಾಡಿಸಿಕೊಳ್ಳುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತಾರೆ.
- ನಿಮ್ಮ ವ್ಯತ್ಯಯಗೊಳ್ಳುವ ವೇತನವನ್ನು ದಾಖಲಿಸಿ: ಗೃಹ ಸಾಲಕ್ಕಾಗಿ ನಿಮ್ಮ ಅರ್ಹತೆಯನ್ನು ವಿಸ್ತರಿಸುವ ಇನ್ನೊಂದು ಮಾರ್ಗವೆಂದರೆ ನಿಮ್ಮ ಆದಾಯದ ದಾಖಲೆಗಳ ಜೊತೆಗೆ ನಿಮ್ಮ ವ್ಯತಯಗೊಳ್ಳುವ ವೇತನದ ಪುರಾವೆಗಳನ್ನು ಒದಗಿಸುವುದಾಗಿದೆ. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮಾಸಿಕ ಪ್ರೋತ್ಸಾಹ ಮತ್ತು ವರ್ಷಾಂತ್ಯದ ಬೋನಸ್ಗಳನ್ನು ನೀಡುತ್ತವೆ, ಇದು ಅವರ ವಾರ್ಷಿಕ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು. ಇದನ್ನು ಹೆಚ್ಚಾಗಿ ವ್ಯತ್ಯಯಗೊಳ್ಳುವ ಸಂಬಳವೆಂದು ಕರೆಯಲಾಗುತ್ತದೆ. ನಿಮ್ಮ ಸಾಲದ ಅರ್ಹತೆಯನ್ನು ಲೆಕ್ಕಾಚಾರ ಮಾಡುವಾಗ ಸಾಲದಾತರು ನಿಮ್ಮ ವ್ಯತ್ಯಯಗೊಳ್ಳುವ ವೇತನವನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ನೀವು ಅದರ ದಾಖಲೆಯನ್ನು ಇಟ್ಟುಕೊಳ್ಳಿ.
- ನಿಮ್ಮ ಕ್ರೆಡಿಟ್ ಸ್ಕೋರ್ಗಳನ್ನು ಸುಧಾರಿಸಿ: ಎಲ್ಲಾ ಸಾಲದಾತರು ನಿಮ್ಮ ಸಾಲದ ಅರ್ಹತಾ ಮಾನದಂಡಗಳನ್ನು ನಿರ್ಣಯಿಸುವಾಗ ನಿಮ್ಮ ಕ್ರೆಡಿಟ್ ಸ್ಕೋರ್ಗಳನ್ನು ಪರಿಗಣಿಸುತ್ತಾರೆ ಮತ್ತು ನೀವು ನಿಮ್ಮ ಕ್ರೆಡಿಟ್ ಸ್ಕೋರ್ಗಳನ್ನು ಪೂರೈಸುವ ಅಗತ್ಯವಿರುತ್ತದೆ. ಸಾಲಕ್ಕೆ ಅರ್ಹರಾಗಲು ನಿಮಗೆ ಕೆಲವೊಮ್ಮೆ 750ರ ಕ್ರೆಡಿಟ್ ಸ್ಕೋರ್ಗಳು ಬೇಕಾಗುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಕಡಿಮೆಯಿದ್ದರೆ, ನಿಮ್ಮ ಸಾಲವನ್ನು ಹೆಚ್ಚಾಗಿ ತಿರಸ್ಕರಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ವಿರುದ್ಧ ನಿಗದಿಪಡಿಸಿದ ಖರ್ಚಿನ ಮಿತಿಯ ಕೇವಲ 30% ನಷ್ಟು ಕ್ರೆಡಿಟ್ ಬಳಕೆಯ ಅನುಪಾತವನ್ನು ನಿರ್ವಹಿಸುತ್ತ ಎಲ್ಲಾ ಅಸ್ತಿತ್ವದಲ್ಲಿರುವ ಸಾಲಗಳನ್ನು ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ಗಳನ್ನು ನೀವು ಸುಧಾರಿಸಿಕೊಳ್ಳಬೇಕು. ಅಲ್ಲದೆ, ಎಲ್ಲಾ ಇಎಂಐ ಮತ್ತು ಕ್ರೆಡಿಟ್ ಸಾಲಗಳನ್ನು ಸಮಯಕ್ಕೆ ಸರಿಯಾಗಿ ತೀರಿಸಿ. ಒಳ್ಳೆಯ ಸಾಲ ಮರುಪಾವತಿ ನಡವಳಿಕೆಯು ನಿಮ್ಮ ಸಾಲದ ಅರ್ಹತೆಯನ್ನು ಚೆನ್ನಾಗಿ ಹೆಚ್ಚಿಸುತ್ತದೆ.
- ಜಂಟಿ ಗೃಹ ಸಾಲ ತೆಗೆದುಕೊಳ್ಳಿ: ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸುವ ಒಂದು ಸರಳ ಮಾರ್ಗವೆಂದರೆ ಜಂಟಿ ಗೃಹ ಸಾಲಕ್ಕೆ ಅರ್ಜಿ ಹಾಕುವುದಾಗಿದೆ. ಉದ್ಯೋಗದಲ್ಲಿರಬಹುದಾದ ಮತ್ತು ಮಾಸಿಕ ಆದಾಯವನ್ನು ತೋರಿಸಬಹುದಾದ ಇನ್ನೊಬ್ಬ ಅರ್ಜಿದಾರರೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ನಿಮ್ಮ ಸಾಲವನ್ನು ಮಂಜೂರು ಮಾಡುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಒಮ್ಮೆ ನೀವು ಜಂಟಿ ಸಾಲವನ್ನು ಆರಿಸಿಕೊಂಡಲ್ಲಿ, ಸಾಲದಾತರು ಇಬ್ಬರೂ ಅರ್ಜಿದಾರರ ಆದಾಯವನ್ನು ಪರಿಗಣಿಸುತ್ತಾರೆ. ನೀವು ಒಳ್ಳೆಯ ಸಾಲದ ಮೊತ್ತವನ್ನೂ ಸಹ ಪಡೆಯುತ್ತೀರಿ.
- ಭಯಪಡಬೇಡಿ ಅಥವಾ ಅವಸರ ಮಾಡಬೇಡಿ: ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಭಯಪಡಬೇಡಿ ಅಥವಾ ಅವಸರ ಮಾಡಬೇಡಿ:. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಸಂಶೋಧನೆ ಮತ್ತು ಸಮಯ ಬೇಕಾಗುತ್ತದೆ. ನಿಮ್ಮ ಬಜೆಟ್ ಅನ್ನು ಅಂದಾಜು ಮಾಡಿ, ನಿಮ್ಮ ಗಳಿಕೆ ಅಥವಾ ಆದಾಯವನ್ನು ಲೆಕ್ಕಹಾಕಿ, ದೋಷಗಳಿಗಾಗಿ ನಿಮ್ಮ ಸಿಬಿಲ್ ವರದಿಯನ್ನು ಪರಿಶೀಲಿಸಿ, ಸಾಲದ ಆಯ್ಕೆಗಳನ್ನು ಹೋಲಿಕೆ ಮಾಡಿ, ಸ್ಥಿರ ಅಥವಾ ಬದಲಾಗುವ ಬಡ್ಡಿದರದಿಂದ ಆರಿಸಿಕೊಳ್ಳಿ ಮತ್ತು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕನಿಷ್ಠ ಹೆಚ್ಚುವರಿ ಶುಲ್ಕಗಳೊಂದಿಗೆ ಅಪೇಕ್ಷಿತ ಬಡ್ಡಿದರಗಳನ್ನು ಆರಿಸಿಕೊಳ್ಳಿ.
ಗೃಹ ಸಾಲವನ್ನು ತೆಗೆದುಕೊಳ್ಳುವುದು ಯಾವಾಗಲೂ ಒಬ್ಬರ ಜೀವನದ ಅತ್ಯಂತ ಕಠಿಣ ಮತ್ತು ದೊಡ್ಡ ಆರ್ಥಿಕ ನಿರ್ಧಾರಗಳಲ್ಲಿ ಒಂದಾಗಿದೆ. ಆದ್ದರಿಂದ, ಈ ಸರಳ ಹಂತಗಳನ್ನು ಪರಿಗಣಿಸುವುದು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಲು ಮತ್ತು ನೀವು ಬಯಸಿದ ಮನೆಯನ್ನು ಖರೀದಿಸಲು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.
ಈ ಲೇಖನವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಿ .