ಪ್ರಧಾನ ಮಂತ್ರಿ ಆವಾಸ್ ಯೋಜನೆ
Pushpanjali • November 13, 2024
Read this in Hindi, Telugu, English & Gujarati.
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಯು ಮೊದಲ-ಬಾರಿಗೆ ಮನೆ ಖರೀದಿಸುವವರಿಗೆ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿದೆ. ಪಿಎಂಎವೈ(PMAY) ನಿಮಗೆ ನೀಡುತ್ತಿರುವ ಪ್ರಮುಖ ಅನುಕೂಲತೆಗಳಲ್ಲಿ ನಿಮ್ಮ ಗೃಹ ಸಾಲದ ಬಡ್ಡಿ ಮೇಲಿನ ಸಬ್ಸಿಡಿಯೂ ಒಂದು. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮತ್ತು ಯೋಜನೆಯಲ್ಲಿ ನಿಗದಿಪಡಿಸಿರುವಷ್ಟು ಕಾರ್ಪೆಟ್ ಏರಿಯಾ ನಿಯಮಗಳನ್ನು ಪೂರೈಸುವಂತೆ ನೀವು ಮನೆಯನ್ನು ಖರೀದಿಸಿದ್ದರೆ, ಆಗ ನಿಮ್ಮ ಗೃಹ ಸಾಲದ ಮೇಲೆ ಪಿಎಂಎವೈ(PMAY) ಸಬ್ಸಿಡಿ ಪಡೆಯುವುದು ನಿಮ್ಮ ಅರ್ಹತೆಯ ಸರಳ ಅಡಿಪಾಯವಾಗಿರುತ್ತದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ಮಧ್ಯಮ-ವರ್ಗದ 1 ಕೋಟಿ ಕುಟುಂಬಗಳಿಗೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ- ನಗರ (PMAY-U) 2.0ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಮುಂದಿನ 5 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಅಗ್ಗದ ದರದ ಮನೆಗಳನ್ನು ನಿರ್ಮಾಣ ಮಾಡಲು, ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ನೆರವು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಮಧ್ಯಮ-ವರ್ಗದ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಎಲ್ಲ-ರೀತಿಯ ವಾತಾವರಣಕ್ಕೂ ಹೊಂದುವಂಥ ಪಕ್ಕಾ ಮನೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೆಂಬಂತೆ ಭಾರತ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿದೆ. ಪಿಎಂಎವೈ-ಯು (PMAY-U) ಯೋಜನೆಯು ಈಗಾಗಲೇ ನಾಗರಿಕರಿಗೆ 1.18 ಕೋಟಿ ಮನೆಗಳ ನಿರ್ಮಾಣಕ್ಕೆ ನೆರವು ನೀಡಿದ್ದು, ದೇಶದ ನಗರ ಪ್ರದೇಶಗಳಲ್ಲಿ ಸುಮಾರು 85.5 ಲಕ್ಷ ಮನೆಗಳನ್ನು ಹಸ್ತಾಂತರಿಸಿದೆ.
ಪಿಎಂಎವೈ (PMAY): ಯಾರಿಗೆ ಇದು ಅನುಕೂಲಕರ?
ಪಕ್ಕಾ ಮನೆಯೊಂದನ್ನು ಹೊಂದುವ ಅಗತ್ಯತೆ ಇರುವಂಥ ದುರ್ಬಲ ವರ್ಗದವರು ಮತ್ತು ಮಧ್ಯಮ-ವರ್ಗದ ಕುಟುಂಬಗಳೇ ಪಿಎಂಎವೈ(PMAY) ಯೋಜನೆಯ ಪ್ರಾಥಮಿಕ ಫಲಾನುಭವಿಗಳಾಗಿದ್ದಾರೆ. ಹೀಗಿದ್ದಾಗ್ಯೂ, ವಿಧವೆಯರು, ಅಲ್ಪಸಂಖ್ಯಾತರು, ಎಸ್‌ಸಿ/ಎಸ್‌ಟಿಗಳು, ನಿರ್ಮಾಣ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಅಂಗನವಾಡಿ ಕಾರ್ಯಕರ್ತರು ಮತ್ತಿತರರ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ.
ಪಿಎಂಎವೈ 2.0 (PMAY 2.0) ಅರ್ಹತಾ ಮಾನದಂಡ
ಪಿಎಂಎವೈ-ಯು 2.0 (PMAY-U 2.0) ಯೋಜನೆಯ ಅನುಕೂಲತೆಗಳನ್ನು ಪಡೆಯಲು ಬೇಕಾದ ಕೆಲವು ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ-
- ದೇಶದಲ್ಲಿ ಬೇರೆಲ್ಲೂ ನೀವು ಪಕ್ಕಾ ಮನೆಯನ್ನು ಹೊಂದಿರಬಾರದು.
- ಇಡಬ್ಲ್ಯುಎಸ್ (ಆರ್ಥಿಕವಾಗಿ ದುರ್ಬಲ ವರ್ಗದವರು) ಕುಟುಂಬದವರಾಗಿದ್ದರೆ, ಅವರ ವಾರ್ಷಿಕ ಆದಾಯವು ₹3 ಲಕ್ಷಗಳನ್ನು ಮೀರಬಾರದು.
- ಎಲ್ಐಜಿ (ಕಡಿಮೆ-ಆದಾಯದ ವರ್ಗದವರು) ಕುಟುಂಬದವರಾಗಿದ್ದರೆ, ವಾರ್ಷಿಕ ಆದಾಯವು ₹3 ಲಕ್ಷದಿಂದ ₹6 ಲಕ್ಷದೊಳಗಿರಬೇಕು.
- ಎಂಐಜಿ (ಮಧ್ಯಮ ಆದಾಯದ ವರ್ಗ) ಕುಟುಂಬದವರಾಗಿದ್ದರೆ, ವಾರ್ಷಿಕ ಆದಾಯವು ₹6ರಿಂದ ₹9 ಲಕ್ಷದೊಳಗಿರಬೇಕು.
- ಈ ಹಿಂದೆ ನೀವು ಸರ್ಕಾರಿ ಗೃಹ ನಿರ್ಮಾಣ ಉಪಕ್ರಮಗಳ ಮೂಲಕ ಯಾವುದೇ ಹಣಕಾಸು ನೆರವನ್ನು ಸ್ವೀಕರಿಸಿರಬಾರದು.
- ಈಗಾಗಲೇ ನಿರ್ಮಾಣಗೊಂಡ ಮನೆಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.
ಪಿಎಂಎವೈ-ಯು 2.0 (PMAY-U 2.0) ಅಡಿಯಿರುವ ವಿಭಾಗಗಳು
ಈ ಕೆಳಗಿನ ವಿಭಾಗಗಳ ಅಡಿಯಲ್ಲಿ ಪಿಎಂಎವೈ-ಯು 2.0 (PMAY-U 2.0) ನಾಗರಿಕರಿಗೆ ಅನುಕೂಲತೆಗಳನ್ನು ಕಲ್ಪಿಸುತ್ತದೆ.
- ಫಲಾನುಭವಿ-ನೇತೃತ್ವದ ನಿರ್ಮಾಣ (BLC)- ಇದರಲ್ಲಿ, ಇಡಬ್ಲ್ಯುಎಸ್(EWS)ನಡಿ ಬರುವ ಅರ್ಹ ಕುಟುಂಬಗಳು ತಮ್ಮ ಸ್ವಂತ ಲಭ್ಯವಿರುವ ಭೂಮಿಯಲ್ಲಿ ಹೊಸ ಮನೆಗಳನ್ನು ನಿರ್ಮಾಣ ಮಾಡಿದರೆ ಯೋಜನೆಯ ಅನುಕೂಲತೆಯನ್ನು ಪಡೆಯಬಹುದಾಗಿದೆ.
- ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ(AHP)- ಎಎಚ್‌ಪಿ (AHP) ಅನ್ವಯ, ಖರೀದಿದಾರರು ಖಾಸಗಿ ಕ್ಷೇತ್ರದ ಯೋಜನೆಯಿಂದ ಮನೆಯನ್ನು ಖರೀದಿಸಿದಾಗ, ಅವರಿಗೆ ರಿಡೀಮ್ ಮಾಡಬಹುದಾದ ಹೌಸಿಂಗ್ ವೋಚರ್‌ಗಳನ್ನು ನೀಡಲಾಗುತ್ತದೆ. ನಾವೀನ್ಯತಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆಯನ್ನು ನಿರ್ಮಿಸಿದ್ದರೆ, ಆಗ ಹೆಚ್ಚುವರಿಯಾಗಿ ಪ್ರತಿ ಯುನಿಟ್‌ಗೆ ಚದರ ಮೀಟರ್‌ಗೆ ₹ 1000 ರೂ.ಗಳಂತೆ ಒದಗಿಸಲಾಗುತ್ತದೆ.
- ಕೈಗೆಟಕುವ ದರದ ಬಾಡಿಗೆ ಮನೆ (ARH)- ಇದು ನಗರದ ವಲಸಿಗರು, ವಿದ್ಯಾರ್ಥಿಗಲು, ಕೈಗಾರಿಕಾ ಕಾರ್ಮಿಕರು, ಉದ್ಯೋಗಸ್ಥ ಮಹಿಳೆಯರು ಮುಂತಾದವರಿಗೆ ಬಾಡಿಗೆ ಮನೆಗಳನ್ನು ಒದಗಿಸುವ ಒಂದು ವಿಶಿಷ್ಟ ಯೋಜನೆಯಾಗಿದೆ. ಸ್ವಂತ ಆಸ್ತಿಯನ್ನು ಹೊಂದಲು ಬಯಸದೇ, ಅಲ್ಪಾವಧಿಯ ವಸತಿ ವ್ಯವಸ್ಥೆಯನ್ನು ಮಾತ್ರ ಬಯಸುವಂಥ ಜನರಿಗೆ ಎಆರ್‌ಎಚ್(ARH) ಕೈಗೆಟಕುವ ದರದಲ್ಲಿ ಮತ್ತು ನೈರ್ಮಲ್ಯಯುಕ್ತ ಪರಿಸ್ಥಿತಿಯಿರುವ ಮನೆಗಳನ್ನು ಒದಗಿಸಲಿದೆ.
- ಬಡ್ಡಿ ಸಬ್ಸಿಡಿ ಯೋಜನೆ (ISS)- ಈ ಯೋಜನೆಯಡಿ, ಇಡಬ್ಲ್ಯುಎಸ್ (EWS), ಎಲ್ಐಜಿ (LIG) ಮತ್ತು ಎಂಐಜಿ (MIG) ಕುಟುಂಬಗಳಿಗೆ ಗೃಹ ಸಾಲದ ಮೇಲೆ ಸಬ್ಸಿಡಿಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯ ವ್ಯಾಪ್ತಿಗೆ ಬರುವ ಆಸ್ತಿಯ ಗರಿಷ್ಠ ಮೌಲ್ಯವು ₹35 ಲಕ್ಷಕ್ಕಿಂತ ಕಡಿಮೆಯಾಗಿರಬೇಕು ಮತ್ತು ಸಾಲದ ಮೌಲ್ಯವೂ ₹25 ಲಕ್ಷಕ್ಕಿಂತ ಕಡಿಮೆಯಿರಬೇಕು. ಈ ಯೋಜನೆಯ ಅನ್ವಯ ಎಲ್ಲ ಫಲಾನುಭವಿಗಳಿಗೂ 4% ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತದೆ. ₹8 ಸಾಲ ಸಬ್ಸಿಡಿಯನ್ನು ಐದು-ವರ್ಷಗಳ ಕಂತಿನಲ್ಲಿ ಒದಗಿಸಲಾಗುತ್ತದೆ.
Read more