ಮನೆ ನಿರ್ಮಾಣ ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಈಗಲೇ ಅರ್ಜಿ ಸಲ್ಲಿಸಿ!
•
ನೀವು ಮನೆಯೊಳಗೆ ಈಜುಕೊಳ ಮತ್ತು ಬಹು ಕಾರ್ ಪಾರ್ಕಿಂಗ್ ಗ್ಯಾರೇಜ್ ಹೊಂದಿರುವ ಮನೆ ಹೊಂದುವ ಕನಸು ಕಾಣುತ್ತಿದ್ದೀರಾ? ನೀವು ಎಂದಾದರೂ ಮನೆ ನಿರ್ಮಿಸುವ ಅಥವಾ ನಿಮ್ಮ ಪ್ರಸ್ತುತ ಮನೆಗೆ ಹೆಚ್ಚುವರಿ ಬೆಡ್ ರೂಂ ಸೇರಿಸಲು ಯೋಚಿಸಿದ್ದೀರಾ? ನಿಜ, ನೀವೀಗ ನಿಮ್ಮ ಕನಸನ್ನು ನನಸಾಗಿಸಬಹುದು, ಏಕೆಂದರೆ ಅಭಿವೃದ್ಧಿ ನಡೆಯುತ್ತಿರುವಾಗ ನಿರ್ಮಾಣ ವೆಚ್ಚಗಳನ್ನು ಹೊಂದಿಸಲು ಬ್ಯಾಂಕ್ ಗಳು ಅಲ್ಪಾವಧಿ ಸಾಲ ನೀಡುತ್ತವೆ. ಮನೆ ನಿರ್ಮಾಣ ಒಂದು ಸಂತೋಷದಾಯಕ ಅನುಭವ, ಆದರೆ ಇದು ದುಬಾರಿ ಪ್ರಕ್ರಿಯೆಯೂ ಆಗಿದೆ. ಹೆಚ್ಚಿನ ಜನರಿಗೆ ಮನೆ ನಿರ್ಮಾಣದ ವೆಚ್ಚ ಪಾವತಿಸಲು ಅಸಾಧ್ಯವಾಗುತ್ತದೆ. ಈ ಸಮಸ್ಯೆಯನ್ನು ಸರಳಗೊಳಿಸಲು, ಅನೇಕ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಮನೆ ನಿರ್ಮಾಣ ಸಾಲದ ರೂಪದಲ್ಲಿ ಹಣಕಾಸಿನ ಸಹಾಯ ನೀಡುತ್ತಿವೆ.
ಮನೆ ನಿರ್ಮಾಣ ಸಾಲ ಎಂದರೇನು?
ಮನೆ ನಿರ್ಮಾಣ ಸಾಲ ಎನ್ನುವುದು ಅಲ್ಪಾವಧಿ ಸಾಲವಾಗಿದ್ದು ಇದನ್ನು ಕಟ್ಟಡ ನಿರ್ಮಾಣಕ್ಕೆ ಪಾವತಿಸಲು ನೀಡಲಾಗುತ್ತದೆ. ಇದು ಒಂದು ವಿಧದ ಗೃಹ ಸಾಲವಾಗಿದ್ದು, ಇದರಲ್ಲಿ ಹೊಸದನ್ನು ಖರೀದಿಸುವ ಬದಲಾಗಿ ನಿಮ್ಮ ಕಟ್ಟಡಕ್ಕೆ ಸಾಲ ಪಡೆಯಲು ನೀಡಲಾಗುತ್ತದೆ. ಕೆಲಸ ನಡೆಯುತ್ತಿದ್ದಂತೆ, ಸಾಲ ತಜ್ಞರು ಹಂತ ಹಂತವಾಗಿ ಹಣ ಪಾವತಿಸುತ್ತಾರೆ. ನೀವು ಮನೆ ನಿರ್ಮಾಣ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ನಿರ್ಮಾಣ ಯೋಜನೆ ಮತ್ತು ಸೂಕ್ತ ಬಜೆಟ್ ಯೋಜನೆಯೊಂದಿಗೆ ವಿವರವಾದ ನಿಗದಿತ ನಿರ್ಮಾಣ ಯೋಜನೆಯನ್ನು ಸಾಲ ತಜ್ಞರಿಗೆ ನೀಡುವ ಅಗತ್ಯವಿದೆ.
ಮನೆ ನಿರ್ಮಾಣ ಸಾಲದ ವಿಧಗಳು:
- ಶಾಶ್ವತ ಮನೆಯ ನಿರ್ಮಾಣ: ಈ ಸಾಲಗಳನ್ನು ನೀವು ಸಕಾರಾತ್ಮಕ ನಿರ್ಮಾಣ ಯೋಜನೆ ಮತ್ತು ವಿವರವಾದ ನಿಗದಿತ ನಿರ್ಮಾಣ ಯೋಜನೆ ಹೊಂದಿದ್ದರೆ ಸ್ವೀಕರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ, ಬ್ಯಾಂಕ್ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಬಿಲ್ಡರ್ ಗೆ ಪಾವತಿಸುತ್ತದೆ. ನಂತರ, ಮುಕ್ತಾಯದಲ್ಲಿ ವೆಚ್ಚವನ್ನು ಗೃಹಸಾಲವಾಗಿ ಬದಲಾಯಿಸಲಾಗುತ್ತದೆ. ಈ ವಿಧದ ಸಾಲವು, ಸ್ಥಿರ ಕಂತು ನೀಡುವುದರಿಂದ, ನೀವು ಮುಕ್ತಾಯದಲ್ಲಿ ಬಡ್ಡಿದರ ಲಾಕ್ ಮಾಡಲು ಅನುಮತಿಸುತ್ತದೆ.
- ನಿರ್ಮಾಣ ಮಾತ್ರ ಸಾಲಗಳು: ನಿರ್ಮಾಣ ಮಾತ್ರ ಸಾಲಗಳನ್ನು ಯೋಜನೆ ಪೂರ್ಣಗೊಂಡಾಗ ಮಾತ್ರ ಪಾವತಿಸಲಾಗುತ್ತದೆ. ನಿಮ್ಮ ಕೈಯಲ್ಲಿ ಸಾಕಷ್ಟು ನಗದು ಹಣವಿದ್ದರೆ ಅಥವಾ ಹಳೆ ಮನೆ ಮಾರಾಟದಿಂದ ಒಟ್ಟು ವೆಚ್ಚದ ಬಗ್ಗೆ ನಿಮಗೆ ತಿಳಿದಿದ್ದರೆ, ಅದನ್ನು ಹೊಸದಾಗಿ ಕಟ್ಟುವ ಮನೆಗೆ ಹೊಂದಿಸಿದ್ದರೆ, ಈ ಸಾಲ ನಿಮಗೆ ಸೂಕ್ತವಾಗುತ್ತದೆ. ಇಲ್ಲಿ, ನೀವು ವೆಚ್ಚ ಹೊಂದಿಸಲು ಅಡಮಾನ ನೀಡುವ ಅಗತ್ಯವಿದ್ದು, ನೀವು ಸಾಲದಾತರನ್ನು ನೀವೇ ಹುಡುಕಿ, ಎರಡನೆಯ ಬಾರಿಗೆ ಅನುಮೋದನೆ ಪಡೆಯಬೇಕು.
- ನವೀಕರಣ ನಿರ್ಮಾಣ ಸಾಲ: ಈ ವಿಧದ ಸಾಲ ಇತರ ಎರಡು ಗೃಹ ಸಾಲಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ನವೀಕರಣ ನಿರ್ಮಾಣ ಸಾಲವನ್ನು ನೀವು ಈಗಾಗಲೇ ಇರುವ ನಿಮ್ಮ ಮನೆಯನ್ನು ನವೀಕರಿಸಲು ಅಥವಾ ಸುಧಾರಿಸಲು ಬಳಸಬಹುದು. ಇಲ್ಲಿ, ನವೀಕರಣದ ಅಂದಾಜು ವೆಚ್ಚವನ್ನು ಖರೀದಿ ಬೆಲೆಯೊಂದಿಗೆ ಗೃಹಸಾಲದೊಂದಿಗೆ ಹೊಂದಿಸಲಾಗುತ್ತದೆ.
ಗೃಹ ನಿರ್ಮಾಣ ಸಾಲದ ಪ್ರಮುಖ ಪ್ರಯೋಜನಗಳು:
ಇಲ್ಲಿ ಕೆಲವು ಪ್ರಮುಖ ಪ್ರಯೋಜನಗಳನ್ನು ನೀಡಲಾಗಿದೆ:
- ಇದು ಅತ್ಯಂತ ಆಕರ್ಷಕ ಬಡ್ಡಿದರವನ್ನು ನೀಡುತ್ತದೆ.
- ಸಾಲದ ಅವಧಿ 30 ವರ್ಷಗಳವರೆಗಿರುತ್ತದೆ
- ವೇಗವಾದ ಅನುಮೋದನಾ ಪ್ರಕ್ರಿಯೆ
- ನಿರ್ಮಾಣ ವೆಚ್ಚದ 100% ವರೆಗೆ ಅಥವಾ ಆಸ್ತಿ ಮೌಲ್ಯದ 90% ವರೆಗೆ, ಯಾವುದು ಕಡಿಮೆಯೋ ಅಲ್ಲಿಯವರೆಗೆ, ಮೌಲ್ಯ ಅನುಪಾತಕ್ಕೆ ಅಧಿಕ ಸಾಲ.
ಅಗತ್ಯವಿರುವ ದಾಖಲಾತಿಗಳು:
ಇಲ್ಲಿ ಗೃಹ ನಿರ್ಮಾಣ ಸಾಲಗಳಿಗೆ ಅಗತ್ಯವಿರುವ ಪ್ರಮುಖ ದಾಖಲಾತಿಗಳ ಪಟ್ಟಿಯನ್ನು ನೀಡಲಾಗಿದೆ.
- ಇತ್ತೀಚಿನ ಪಾಸ್ ಪೋರ್ಟ್ ಫೋಟೋದೊಂದಿಗೆ ಸೂಕ್ತವಾಗಿ ಭರ್ತಿ ಮಾಡಿದ ಅರ್ಜಿ ನಮೂನೆ
- ವಯಸ್ಸಿನ ರುಜುವಾತು
- ವಿಳಾಸದ ರುಜುವಾತು
- ಆದಾಯದ ರುಜುವಾತು ಅಥವಾ ಬ್ಯಾಂಕ್ ವಿವರಣೆ
- ಆಸ್ತಿ ಅಥವಾ ಭೂಮಿ ಸಂಬಂಧಿತ ದಾಖಲಾತಿಗಳು
- ನಿರ್ಮಾಣ ವೆಚ್ಚದ ಅಂದಾಜು ಉಲ್ಲೇಖ
ಮನೆ ನಿರ್ಮಾಣ ಸಾಲ ಕ್ಕೆ ಅರ್ಜಿ ಸಲ್ಲಿಸುವುದು:
ಗೃಹ ನಿರ್ಮಾಣ ಸಾಲ ಪ್ರಕ್ರಿಯೆ ಗೃಹ ಸಾಲಕ್ಕೆ ಸಮನಾಗಿರುತ್ತದೆ. ಮಿತವ್ಯಯಕಾರಿ ಇಎಂಐ ಪ್ರೀಕ್ಷಿಸಲು ಯಾವಾಗಲೂ ಗೃಹ ಸಾಲದ ಇಎಂಐ ಲೆಕ್ಕ ಬಳಸಬೇಕು. ಹೋಂ ಫಸ್ಟ್ ಫೈನಾನ್ಸ್ ಕಂಪನಿ ನಿಮಗೆ ಕಡಿಮೆ ಬಡ್ಡಿದರದಲ್ಲಿ ನಿಮ್ಮ ಕನಸಿನ ಮನೆ ನಿರ್ಮಿಸಲು ನೆರವಾಗುತ್ತದೆ.
ನೀವು ಹೋಂಫಸ್ಟ್ ನಲ್ಲಿ ಈ ಕೆಳಗಿನ ಕೆಲವು ಹಂತಗಳ ಮೂಲಕ ಗೃಹ ನಿರ್ಮಾಣ ಸಾಲಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು:
- ಹೋಂಫಸ್ಟ್ ವೆಬ್ ಸೈಟ್ ನಲ್ಲಿ ಗೃಹನಿರ್ಮಾಣ ಲೋನ್ ಪುಟಕ್ಕೆ ಭೇಟಿ ನೀಡಿ
- ಎಲ್ಲಾ ಅಗತ್ಯ ವಿವರಗಳೊಂದಿಗೆ ಈಗ ಅರ್ಜಿ ಸಲ್ಲಿಸಿ ನಮೂನೆ ಭರ್ತಿ ಮಾಡಿ
- ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ, ಪ್ರಕ್ರಿಯೆಯನ್ನು ಸರಳಗೊಳಿಸಲು ನಿಮ್ಮಿಂದ ದಾಖಲಾತಿಗಳನ್ನು ಸಂಗ್ರಹಿಸಲು ಮನೆಗೆ ವ್ಯಕ್ತಿಯನ್ನು ಕಳುಹಿಸಲಾಗುತ್ತದೆ
ಗೃಹ ನಿರ್ಮಾಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಂತರದ ಹಂತದಲ್ಲಿ ಯಾವುದೇ ಗೊಂದಲವಾಗದಂತೆ ತಡೆಯಲು ಸಾಲ ಪಡೆಯಲು ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀಡಲಾಗಿದೆಯೇ ಎಂದು ಪರೀಕ್ಷಿಸಿ.
ನಿಮ್ಮ ಆಸ್ತಿಯಲ್ಲಿ ಮನೆ ನಿರ್ಮಿಸುತ್ತಿದ್ದೀರಾ? ಅಥವಾ ಮತ್ತೊಂದು ಮಹಡಿ ಕಟ್ಟಿಸುತ್ತಿದ್ದೀರಾ? ಕಾರಣ ಯಾವುದೇ ಇರಲಿ, ಹೋಂಫಸ್ಟ್ ನಿಮಗೆ ಸಾಲ ನೀಡುವ ಮೂಲಕ, ನಿಮ್ಮ ಮನೆಯನ್ನು ಮತ್ತಷ್ಟು ಸುಂದರವಾಗಿಸುತ್ತಿದೆ.
ಈ ಲೇಖನವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಿ .